Neene Yendigu Kannada Lyrics
(Love Mocktail)
|
Kannada Lyrics:
------------------------------------------------------
Charana 1:
ಈ ಕನಸಲಿ ದಿನವು ಸುರಿಸಿದೆ ಒಲವು ನಗುತಲೀ ನೀನೂ
ಈ ಮನಸಲೀ ನಲಿವು ಬದುಕಲೀ ಗೆಲುವು ತರುತಲೀ ನೀನೂ
ಉಸಿರೇ ನನದಾಗಿ ನೀನಿರುವಾ ಹಾಗೇ
ಕೊರಳ ದನಿಯಾಗಿ ನನ್ನ ಹಾಡಾಗುವೇ
Chorus 1:
ನನ್ನ ಸ್ನೇಹ ನನ್ನ ಪ್ರೇಮಾ ನನ್ನ ಪ್ರೀತಿ ನೀನೇ
ನನ್ನ ಜೀವ ನನ್ನ ಭಾವ ನನ್ನ ಲೋಕ ನೀನೇ....... ಎಂದಿಗೂ....
Charana 2:
ಈ ಒಡಲಲೀ ಮಿಡಿತ ಹೃದಯದ ಬಡಿತ ತುಡಿತವೂ ನೀನೂ
ಈ ಎದೆಯಲೀ ಸೆಳೆತ ಒಲವಿನ ಮೊರೆತ ಸ್ಮರಣೆಯು ನೀನೂ
ಒಲವೇ ವರವಾಗಿ ಬಂದಿರುವಾ ಹಾಗೆ
ಜನುಮ ನನದೆಲ್ಲ ನಿನದಾಗಿದೆ
Chorus 2:
ನನ್ನ ಸ್ನೇಹ ನನ್ನ ಪ್ರೇಮಾ ನನ್ನ ಪ್ರೀತೀ ನೀನೇ
ನನ್ನ ಜೀವ ನನ್ನ ಭಾವ ನನ್ನ ಲೋಕ ನೀನೇ..... ಎಂದಿಗೂ...
Bridge:
ನೋವಿಗೆ ನಗುವ ತರುವೇ ನೀನು
ಕತ್ತಲಲಿ ಬೆಳಕ ತರುವೆ ನೀನು
ನನ್ನಾಸೆಯ ಹರಿವು ನೀನೂ
ನೀನಾಗಿರುವೆ ನನ್ನಾ ನಿಲುವೂ...
Chorus 3:
ನನ್ನ ಪ್ರೀತೀ ನನ್ನ ಕೀರ್ತಿ ಮನಃ ಶಾಂತಿ ನೀನೇ
ನನ್ನ ಧೈರ್ಯ ನನಸ್ಥೈರ್ಯ ಐಶ್ವರ್ಯವು ನೀನೇ....... ಎಂದಿಗೂ....
ನನ್ನ ಮಾನ ನನ್ನ ಪ್ರಾಣ ಸನ್ಮಾನ ನೀನೇ
ನನ್ನ ಮೌನ ನನ್ನ ಧ್ಯಾನ ಸನ್ಮಾರ್ಗ ನೀನೇ..... ಎಂದಿಗೂ
------------------------------------------------------
Nice content.. thanks for sharing
ReplyDeleteCould you please backlink to me
kannada lyrics
Nice Post Keep Uploading......For more Lyrics Kannada new Songs Lyrics In English And Kannada
ReplyDelete