Onde Usiranthe Lyrics (Sneha Loka)
|
Kannada Lyrics
ಹಾಡು ಹಾಡು ಒಂದು ಹಾಡು ಹಾಡು
Hmm...
ಹಾಡದಿದ್ದರೆ ನನ್ನ ಹಾಡು ಕೇಳು
Hmm...
ಉಸಿರು ಕಟ್ಟಿ ಹಾಡುವೆ ಈ ಹಾಡು
Hmm...
ಈ ಉಸಿರು ನಿಂತರೆ ನಿಂಗೇ ನಷ್ಟ ನೋಡು
ಒಂದೇ ಉಸಿರಂತೆ ಇನ್ನು ನಾನು ನೀನು
ನಾನು ನೀನು ಬೇರೆ ಏನು
ನೀನೆ ನಾನು ನಾನೆ ನೀನು
ಒಂದೇ ಕಡಲಂತೆ ಇನ್ನು ನಾನು ನೀನು
ತೀರ ಸಾಗರ ಬೇರೆ ಏನು
ಬೇರೆ ಎಂದರೆ ಅರ್ಥ ಏನು
ಹಾಡೇ ಕೋಗಿಲೆ ಒಂದೇ ಉಸಿರಿನಲಿ
ಚಂದಿರನನ್ನು ಚಂದಿರನೆನ್ನಲು
ಅಂಜಿಕೆಯೇನು ಅಳುಕಿನ್ನೇನು
ಕೇಳೇ ಕೋಗಿಲೆ ನನ್ನ ಕೊರಳಿನಲಿ
ನಿನ್ನ ಹೆಸರೇ ಕೊನೆಯ ಮಾತು
ಕೊನೆಯ ನಾದ ಕೊನೆಯ ವೇದ
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
ಕೊಡುವೆ ನನ್ನ ಪ್ರಾಣ ಪ್ರೀತಿ
Hmm... Ooo..
ಒಂದೇ ಉಸಿರಂತೆ ಇನ್ನು ನಾನು ನೀನು
ನಾನು ನೀನು ಅಲ್ಲ ಇನ್ನು
ನೀನೆ ನಾನು ನಾನೆ ನೀನು
ಯತ್ತ ಇತ್ತೋ ಎಂತೋ ಬಂತೊ ಕಾಣೆ ನಾನು
ಒಂದೇ ಧೈರ್ಯ ಒಂದೇ ಹುರುಪು
ಹಾಡೊ ಹಂಬಲ ತಂದೆ ನೀನು
ಕೋಟಿ ಕೋಗಿಲೆ ಒಂದೇ ಉಸಿರಿನಲಿ
ಪ್ರೀತಿ ಮಾಡು ಪ್ರೀತಿಯ ಬೇಡು
ಅಂದಿದೆ ಅಂದಿದೆ ಹಾಡಿದೆ ಹೆಣ್ಣೆದೆ
ಅಂತರಂಗದ ಸಹ್ಯಾದ್ರಿ ಮಡಿಲಲಿ
ನೂರು ನವಿಲಾಗಿ ಹೃದಯ
ಆಡಿದೆ ಆಡಿದೆ ಕುಣಿದಿದೆ ಕುಣಿದಿದೆ
ಕಾದಿದೆ ಕಾದಿದೆ ಪ್ರೀತಿಯ ನೀಡಲು
ಒಂದೇ ಉಸಿರಲಿ ನಿಂತಿದೆ ನಿಂತಿದೆ
ಓ...
ಇಂದು ಪ್ರೀತಿಯು ಹಾಡಿದ ಪರ್ವ ದಿನ ಆ...
ಇಂದು ಪ್ರೀತಿಯು ಹಾಡಿದ ಪರ್ವ ದಿನ
ಅದ ಕೇಳಲು ದಕ್ಕಿದ ಪುಣ್ಯ ದಿನ
ಅದು ಬೆಳಕಂತೆ ಮುಟ್ಟಲಾಗದಂತೆ
ಬೆಳದಿಂಗಳಂತೆ ಅಪ್ಪಲಾಗದಂತೆ
ಗೆಳತಿ ಗೆಳತಿ ಪ್ರೀತಿಯ ಗೆಳತಿ
ನೀನೆ ನನ್ನೀ ಪ್ರೀತಿಯ ಒಡತಿ
ಬ್ರಹ್ಮ ಬಾರಿ ಜಾಣ ಜಾಣ
ನಾರೀಲಿಟ್ಟ ಪ್ರೀತಿ ಪ್ರಾಣ
ನಾರಿ ನೀನೆ ಪ್ರೀತಿಯ ರೂಪ
ನೀನೆ ತಾನೇ ಹೃದಯದ ದೀಪ
ಹೊತ್ತಿಕೊಂಡಿತಮ್ಮ ನಮ್ಮ ಪ್ರೀತಿ ಜ್ಯೋತಿ
ಗಾಳಿ ಅಲ್ಲ ಮಳೆಯೂ ಅಲ್ಲ
ಭೂಮಿ ಬಿರಿದರು ಆರೋದಿಲ್ಲ
ಒಂದೇ ದೀಪದಂತೆ ಇನ್ನು ನಾನು ನೀನು
ಎಣ್ಣೆ ದಾರ ಬೇರೆ ಏನು
ಬೇರೆ ಎಂದರೆ ಅರ್ಥ ಏನು
ಚಂದಮಾಮನೇ ಕೇಳೊ ನಮ್ಮಿಬ್ಬರ
ನೀನು ಕಂಡ ಪ್ರೇಮಿಗಳಲ್ಲಿ
ನಮ್ಮನು ಸೇರಿಸು ಅವರಿಗು ಹೋಲಿಸು
ಚಂದಮಾಮನೇ ಕೇಳೊ ನಮ್ಮಾಣೆಯ
ನಮ್ಮಿಂದಂತು ಪ್ರೀತಿಗೆ ದ್ರೋಹ
ಆಗದು ಆಗದು ಎಂದಿಗೂ ಆಗದು
ಆಗುವೂದಾದರೆ ಇಂದೇ ಆಗಲಿ
ಆಗುವ ಮೊದಲೇ ಪ್ರಾಣ ಹೋಗಲಿ
ಆ...
ಚಂದನ ಚಂದನ ಕಂಪಿನ ಚಂದನ
ನಿನ್ನೀ ಉಸಿರಿನ ಕಸ್ತೂರಿ ಸಿಂಚನ
ಕಂಪನ ಕಂಪನ ಇಂಪಿನ ಕಂಪನ
ನಿನ್ನೀ ಮಾತಿನ ಅಮೃತ ಸಿಂಚನ
ಗಾಯನ ಗಾಯನ ನಿನ್ನೀ ಪ್ರೀತಿಯ
ಜೀವನ ಚೇತನ ಗಾಯನ ಗಾಯನ
ಅಯನ ಅಯನ ನಿನ್ನ ನೆರಳಲಿ
ನನ್ನೀ ಜನುಮದ ಪ್ರೇಮಾಯನ
ನಡೆ ಕಲ್ಲಿರಲಿ ಕಲ್ಲು ಮುಳ್ಳಿರಲಿ...
ಕಲ್ಲಿರಲಿ ಕಲ್ಲು ಮುಳ್ಳಿರಲಿ
ನಡೆ ಮಳೆಯಿರಲಿ ಮಳೆ ಬಿಸಿಲಿರಲಿ
ಪ್ರೇಮಾಯನಕೆ ನಿನ್ನ ನೆರಳಿರಲಿ
ಜನುಮಾಯನಕೆ ನಿನ್ನ ಕೊಡೆಯಿರಲಿ
ಭಯವಿಲ್ಲ ಇನ್ನು ಭಯವಿಲ್ಲ
ನನ್ನ ನಿರ್ಧಾರ ಇನ್ನು ನನದಲ್ಲ
ನನ್ನಾ ಎದೆಯಲೊಬ್ಬ ಚಂದ್ರ
ಬೆಳ್ಳೀ ಬೆಳಕ ತಂದ ತಂದ
ಪ್ರೀತಿಯಂದರೇನು ಅಂದ
ಕೇಳಿ ತಾನೇ ಉತ್ತರ ತಂದ
ಸ್ವಚ್ಛ ಬಿಳುಪಿನಂತೆ ಇನ್ನು ನಾನು ನೀನು
ಏಳು ಬಣ್ಣ ಸೇರಿಬಿಳುಪಾದ ಹಾಗೆ ನೀನು ನಾನು
ಒಂದೇ ಹಾಡಂತೆ ಇನ್ನು ನಾನು ನೀನು
ಏಳು ಭಾವ ಕೂಡಿಕೊಂಡ
ಬಾಳಿನಂತೆ ನಾನು ನೀನು
ಚಂದಮಾಮನೇ ಕೇಳೊ ನಮ್ಮಿಬ್ಬರ
ನೀನು ಕಂಡ ಪ್ರೇಮಿಗಳಲ್ಲಿ
ನಮ್ಮನು ಸೇರಿಸು ಅವರಿಗು ಹೋಲಿಸು
ಚಂದಮಾಮನೇ ಕೇಳೊ ನಮ್ಮಾಣೆಯ
ನಮ್ಮಿಂದಂತು ಪ್ರೀತಿಗೆ ದ್ರೋಹ
ಆಗದು ಆಗದು ಎಂದಿಗೂ ಆಗದು
ಆಗುವೂದಾದರೆ ಇಂದೇ ಆಗಲಿ
ಆಗುವ ಮೊದಲೇ ಪ್ರಾಣ ಹೋಗಲಿ
Hmm... Ooo..
ಒಂದೇ ಉಸಿರಂತೆ ಇನ್ನು ನಾನು ನೀನು
ನಾನು ನೀನು ಬೇರೆ ಏನು
ನೀನೆ ನಾನು ನಾನೆ ನೀನು
ಒಂದೇ ಕಡಲಂತೆ ಇನ್ನು ನಾನು ನೀನು
ತೀರ ಸಾಗರ ಬೇರೆ ಏನು
ಬೇರೆ ಎಂದರೆ ಅರ್ಥ ಏನು
ಹಾಡೇ ಕೋಗಿಲೆ ಒಂದೇ ಉಸಿರಿನಲಿ
ಚಂದಿರನನ್ನು ಚಂದಿರನೆನ್ನಲು
ಅಂಜಿಕೆಯೇನು ಅಳುಕಿನ್ನೇನು
ಕೇಳೇ ಕೋಗಿಲೆ ನನ್ನ ಕೊರಳಿನಲಿ
ನಿನ್ನ ಹೆಸರೇ ಕೊನೆಯ ಮಾತು
ಕೊನೆಯ ನಾದ ಕೊನೆಯ ವೇದ
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
ಕೊಡುವೆ ನನ್ನ ಪ್ರಾಣ ಪ್ರೀತಿ
ಕನ್ನಡದ one most meorbal ಸಾಂಗ್
ReplyDeleteಕನ್ನಡದ one most meorbal ಸಾಂಗ್
ReplyDeletesuperb song, really loved it...
ReplyDeleteOne of my fav song ... :-)
ನಾನು ಯಾವಾಗಲೂ ಇಷ್ಟ ಪಡುವ ಮಧುರವಾದಂತಹ ಪದ್ಯ.
ReplyDeleteನಾನು ಯಾವಾಗಲೂ ಇಷ್ಟ ಪಡುವ ಮಧುರವಾದಂತಹ ಪದ್ಯ.
ReplyDeleteನಾನು ಯಾವಾಗಲೂ ಇಷ್ಟ ಪಡುವ ಮಧುರವಾದಂತಹ ಪದ್ಯ.
ReplyDeleteಬೀಳೋ ಪಾದ ಬದಲು ಬಿಳುಪಾದ ಆಗಬೇಕು ಅಲ್ಲವೇ?
ReplyDeleteಧನ್ಯವಾದಗಳು
DeleteEvergreen song, sung by RK
ReplyDeleteIt should be ಚಂದಮಾಮನೆ ನೋಡೋ ನಮ್ಮಿಬ್ಬರ.
ReplyDeleteMind blowing 😍😍😍😍
ReplyDeleteSuperrrrrr song forever....
ReplyDelete👌
ReplyDeleteSuperrrrr.....
ReplyDeleteOne of my favorite song
Super Music Composition ..... Hatts of to K S Chithra Madam and Rajesh Sir
ReplyDeleteSemma song... always heart stealing voice ♥️
ReplyDeleteEvergreen song...thanks for lyricst and singer for giving this song..
ReplyDeleteಅದ್ಭುತವಾದ ಹಾಡುಗಾರಿಕೆ ಕೆ ಎಸ್ ಚಿತ್ರಾ ಅಮ್ಮ ಹಾಗೂ ರಾಜೇಶ್ ಕೃಷ್ಣನ್ ಅವರಿಂದ 🙏🙏
ReplyDeleteManasanu beech itta song, manasige itha and santhosha, hats off to the person who has written this song lyrics... Thankyou somuch...
ReplyDeleteBetefull songs
ReplyDeleteBro why didn't u insert adds on this blog?
ReplyDeleteOnde usirante lyrics amazing lyrics
ReplyDeleteSuper song one of my favorite song🎵
ReplyDeleteI tried to sing it in single breath 😁 i can't belive i have taken 3/4 breath to sing every paragraph....really devine song for couples
ReplyDeleteHat's off to SINGERS
ReplyDelete