Sunday, March 22, 2020

Thaayi Sharade Loka Poojithe Lyrics | Bettada Hoovu (1985)


Thaayi Sharade Lyrics
(Bettada Hoovu)



Song: Taayi shaarade loka poojithe
Movie: Bettada Hoovu (1985)
Singer: P.B. Srinivas, Punit Rajkmar
Lyrics: Chi Udayashankar
Music : Rajan Nagendra
Starring: Punit Rajkumar, Padma Vasanthi, BalaKrishna, Lakshmi Narayana



Kannada Lyrics:
------------------------------------------------------
ತಾಯಿ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೆ ||2||
ಪ್ರೇಮದಿಂದಲಿ ಸಲಹು ಮಾತೆ
ನೀಡು ಸನ್ಮತಿ ಸೌಕ್ಯದಾತೆ ||2||
ತಾಯಿ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೆ

ಅಂಧಕಾರವ ಓಡಿಸು
ಜ್ಞಾನಜ್ಯೋತಿಯ ಬೆಳಗಿಸು ||2||
ಹೃಧಯ ಮಂದಿರದಲ್ಲಿ ನೆಲೆಸು
ಚಿಂತೆಯ ಅಳಿಸು ||2||
ಶಾಂತಿಯ ಉಳಿಸು ||2||
ತಾಯಿ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೆ

ನಿನ್ನ ಮಡಿಲಿನ ಮಕ್ಕಳಮ್ಮ
ನಿನ್ನ ನಂಬಿದ ಕಂದರಮ್ಮ ||2||
ನಿನ್ನ ಕರುಣೆಯ ಬೆಳಕಲೆಮ್ಮ
ಬಾಳನು ಬೆಳಗಮ್ಮ ||2||
ನಮ್ಮ ಕೋರಿಕೆ ಆಲಿಸಮ್ಮ ||2||
ತಾಯಿ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೆ

ಒಳ್ಳೆ ಮಾತುಗಲಾಡಿಸು
ಒಳ್ಳೆ ಕೆಲಸವ ಮಾಡಿಸು ||2||
ಒಳ್ಳೆ ದಾರಿಯಲೆಮ್ಮ ನಡೆಸು
ವಿದ್ಯೆಯ ಕಲಿಸು ||2||
ಆಸೆ ಪೂರೈಸು ||2||
ತಾಯಿ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೆ


Thank you for the lyrics:
Shyam Bhardwaj Vlogs Official
------------------------------------------------------