Saturday, December 23, 2017

Entha Lokavayya Kannada Song Lyrics - Narada Vijaya (1980) | K.J. Yesudas, Ananth Nag


Entha Lokavayya Kannada Lyrics
(Narada Vijaya)


Song: Idu Entha Lokavayya
Movie: Narada Vijaya (1980)
Singer: K.J. Yesudas
Lyrics: Chi Udayashankar
Music : Ashwath-Vaidi
Starring: Ananth Nag, M.P. Shankar, Padmapriya



Kannada Lyrics:
------------------------------------------------------
ಎಂಥ ಲೋಕವಯ್ಯ ... ಇದು ಎಂಥ ಲೋಕವಯ್ಯ
ಹೊಸ ತನವ ಕೊಡುವ, ಹೊಸ ವಿಷಯ ಅರಿವ
ಹೊಸ ತನವ ಕೊಡುವ, ಹೊಸ ವಿಷಯ ಅರಿವ, ಬಯಕೆ ತರುವ
ಇದು ಎಂಥ ಲೋಕವಯ್ಯ
ಇದು ಎಂಥ ಲೋಕವಯ್ಯ

ಕಡಲಲ್ಲಿ ಧುಮುಕಿ ಹೋರಾಡುವ
ಮುಗಿಲೇರಿ ಮೇಲೆ ತೇಲಾಡುವ
ಆ ಚಂದ್ರನೆಡೆಗೆ ಹಾರಾಡುವ
ಗ್ರಹ ತಾರೆಗಳಿಗೆ ಕೈಚಾಚುವ
ಜನರಿಂದ ತುಂಬಿ ಮೆರೆವಾ ...
ಜನರಿಂದ ತುಂಬಿ ಮೆರೆವಾ
ಇದು ಎಂಥ ಲೋಕವಯ್ಯ
ಹೊಸ ತನವ ಕೊಡುವ, ಹೊಸ ವಿಷಯ ಅರಿವ, ಬಯಕೆ ತರುವ
ಇದು ಎಂಥ ಲೋಕವಯ್ಯ

ಬಡತನದ ಜೊತೆಗೆ ಬಡಿದಾಡುವ
ಸುಖವನ್ನು ಅರಸಿ ಅಲೆದಾಡುವ
ಹೊಸದನ್ನು ದಿನವು ಹುಡುಕಾಡುವ
ಛಲವನ್ನು ಬಿಡದೆ ಸೆಣೆಸಾಡುವ
ಜನರಿಂದ ತುಂಬಿ ಮೆರೆವಾ ...
ಜನರಿಂದ ತುಂಬಿ ಮೆರೆವಾ
ಇದು ಎಂಥ ಲೋಕವಯ್ಯ
ಹೊಸ ತನವ ಕೊಡುವ, ಹೊಸ ವಿಷಯ ಅರಿವ, ಬಯಕೆ ತರುವ
ಇದು ಎಂಥ ಲೋಕವಯ್ಯ ?
ಆ ... ಆ ... ಆ...

------------------------------------------------------