Saturday, December 23, 2017

Entha Lokavayya Kannada Song Lyrics - Narada Vijaya (1980) | K.J. Yesudas, Ananth Nag


Entha Lokavayya Kannada Lyrics
(Narada Vijaya)


Song: Idu Entha Lokavayya
Movie: Narada Vijaya (1980)
Singer: K.J. Yesudas
Lyrics: Chi Udayashankar
Music : Ashwath-Vaidi
Starring: Ananth Nag, M.P. Shankar, Padmapriya



Kannada Lyrics:
------------------------------------------------------
ಎಂಥ ಲೋಕವಯ್ಯ ... ಇದು ಎಂಥ ಲೋಕವಯ್ಯ
ಹೊಸ ತನವ ಕೊಡುವ, ಹೊಸ ವಿಷಯ ಅರಿವ
ಹೊಸ ತನವ ಕೊಡುವ, ಹೊಸ ವಿಷಯ ಅರಿವ, ಬಯಕೆ ತರುವ
ಇದು ಎಂಥ ಲೋಕವಯ್ಯ
ಇದು ಎಂಥ ಲೋಕವಯ್ಯ

ಕಡಲಲ್ಲಿ ಧುಮುಕಿ ಹೋರಾಡುವ
ಮುಗಿಲೇರಿ ಮೇಲೆ ತೇಲಾಡುವ
ಆ ಚಂದ್ರನೆಡೆಗೆ ಹಾರಾಡುವ
ಗ್ರಹ ತಾರೆಗಳಿಗೆ ಕೈಚಾಚುವ
ಜನರಿಂದ ತುಂಬಿ ಮೆರೆವಾ ...
ಜನರಿಂದ ತುಂಬಿ ಮೆರೆವಾ
ಇದು ಎಂಥ ಲೋಕವಯ್ಯ
ಹೊಸ ತನವ ಕೊಡುವ, ಹೊಸ ವಿಷಯ ಅರಿವ, ಬಯಕೆ ತರುವ
ಇದು ಎಂಥ ಲೋಕವಯ್ಯ

ಬಡತನದ ಜೊತೆಗೆ ಬಡಿದಾಡುವ
ಸುಖವನ್ನು ಅರಸಿ ಅಲೆದಾಡುವ
ಹೊಸದನ್ನು ದಿನವು ಹುಡುಕಾಡುವ
ಛಲವನ್ನು ಬಿಡದೆ ಸೆಣೆಸಾಡುವ
ಜನರಿಂದ ತುಂಬಿ ಮೆರೆವಾ ...
ಜನರಿಂದ ತುಂಬಿ ಮೆರೆವಾ
ಇದು ಎಂಥ ಲೋಕವಯ್ಯ
ಹೊಸ ತನವ ಕೊಡುವ, ಹೊಸ ವಿಷಯ ಅರಿವ, ಬಯಕೆ ತರುವ
ಇದು ಎಂಥ ಲೋಕವಯ್ಯ ?
ಆ ... ಆ ... ಆ...

------------------------------------------------------

Saturday, February 25, 2017

Kagada Doniyali Lyrics | Kannada Song - Kirik Party (2016)


Kagada Doniyalli Lyrics
(Kirik Party)


Song: Kagada Doniyali
Movie: Kirik Party (2016)
Singer: Vasuki Vaibhav
Lyrics: Jayanth Kaikini, Rakshit Shetty, Dhananjay Ranjan, Kiran Kaverappa, Veeresh Shivamurthy
Music : B Ajaneesh Lokanath
Starring: Rakshit Shetty, Rashmika Madanna



Kannada Lyrics: (Scroll to bottom for English Lyrics)
------------------------------------------------------
ಕಾಗದದ ದೋಣಿಯಲ್ಲಿ ನಾ ಕೂರುವಂತ ಹೊತ್ತಾಯಿತೇ
ಕಾಣಿಸದ ಹನಿಯೊಂದು ಕಣ್ಣಲ್ಲೇ ಕೂತು ಮುತ್ತಾಯಿತೇ
ಹಗುರಾದೀತೇನೋ ನನ್ನೆದೆಯ ಭಾರ
ಕಂಡಿತೇನೋ ತಂಪಾದ ತೀರಾ
ಸಿಕ್ಕೀತೆ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ

ಹಾದಿಯಲಿ ಹೆಕ್ಕಿದ ನೆನಪಿನ ಪುಟ್ಟ ಜೋಳಿಗೆ ಬೆನ್ನಲ್ಲಿದೆ
ಆಡದಿರೋ ಸಾವಿರ ಪದಗಳ ಮೂಕ ಸೇತುವೆ ಕಣ್ಮುಂದಿದೆ
ಈ ಹೆಜ್ಜೆಯ ಗುರುತೆಲ್ಲವ ಅಳಿಸುತ್ತಿರೋ ಮಳೆಗಾಲವೇ
ನಾ ನಿನ್ನಯ ಮಡಿಲಲ್ಲಿರೋ ಬರಿಗಾಲಿನ ಮಗುವಾಗುವೆ
ಮನಸಾದೀತೇನೋ ಇನ್ನೂ ಉದಾರ
ಬಂದಿತೇನೋ ನನ್ನ ಬಿಡಾರ

ಸಿಕ್ಕೀತೆ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ

------------------------------------------------------


English Lyrics:
------------------------------------------------------
Kaagadada doNiyalli naa kooruvanta hotthayite
KaaNisada haniyondu kaNNalle koothu mutthayite 
HaguraadeetEno nannedeya bhaara
KanDitEno tampaada teera
SikkIte mundina daari
Nannella kalpane meeri
Innonde vismaya tOri

Haadiyali hekkida nenapina puTTa jOLige bennallide
AaDadiro saavira padagaLa mooka sEtuve kaNmundide 
Ee hejjeya gurutellava aLisuttiro maLegaalave
Na ninnaya maDilalliro barigaalina maguvaaguve
ManasaadeetEno innu udaara
BanditEno nanna biDaara

SikkIte mundina daari
Nannella kalpane meeri
Innonde vismaya tOri

Sunday, January 1, 2017

Belageddu Lyrics | Belageddu Yara Mukhava Lyrics | Kannada Song - Kirik Party (2016)

Belageddu Lyrics
(Kirik Party)


Song: Belageddu
Movie: Kirik Party (2016)
Singer: Vijay Prakash
Lyrics: Dhananjay Ranjan
Music : B Ajaneesh Lokanath
Starring: Rakshit Shetty, Rashmika Madanna



Kannada Lyrics:
------------------------------------------------------
ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೆ
ನೆನ್ನೆ ಕಂಡ ಕನಸು Black and White-u 
ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ ಬರೆಯೋ ಗಮನ
ಈಗ ತಾನೇ ಮೂಡಿದೆ
ಕನಸಲ್ಲಿ  (ಅರ್ರೆ ರ್ರೇ ರ್ರೇ..)
ಬಳಿ ಬಂದು (ಅಲ್ಲೇ ಲ್ಲೇ ಲ್ಲೇ..)
ಮುದ್ದಾಡಿ (ಅಯ್ಯಯ್ಯಯ್ಯಯ್ಯೊ)
ಕಚಗುಳಿ ತಾಳಲಾರೆ
ಇನ್ನೊಮ್ಮೆ
ಕನಸಲ್ಲಿ  (ಅರ್ರೆ ರ್ರೇ ರ್ರೇ..)
ಬಳಿ ಬಂದು (ಅಲ್ಲೇ ಲ್ಲೇ ಲ್ಲೇ..)
ಮುದ್ದಾಡಿ (ಅಯ್ಯಯ್ಯಯ್ಯಯ್ಯೊ)
ಕಚಗುಳಿ ತಾಳಲಾರೆ

ಪ್ರೀತಿಯಲ್ಲಿ ಹೊಸದಾರಿ ಕಟ್ಟುವ ಖಯಾಲಿ
ಅಡ್ಡಾದಿಡ್ಡಿ ಹೋಗೋದು ಮಾಮೂಲಿ
ಸನ್ನೆಯಲ್ಲೇ ಹಾಡೊಂದು ಹಾಡುವ ವಿಧಾನ
ಕಾದು ಕೇಳೋ ಪ್ರೀತಿನೇ ಮಜಾನಾ
ಬಿಡದಂತಿರೋ ಬೆಸುಗೆ
ಸೆರೆ ಸಿಕ್ಕಿರೋ ಸಲಿಗೆ
ನಿನ್ನ ಸುತ್ತ ಸುಳಿಯೋ
ಆಸೆಗೀಗ ಆಯಸ್ ಹೆಚ್ಚಿ ಹೋಗಿದೆ
ನಿನ್ನ ಜೊತೆ ಕಳೆಯೋ ಎಲ್ಲ ಕ್ಷಣವು
ಕಲ್ಪನೆಗೂ ಮೀರಿದೆ
ಕನಸಲ್ಲಿ  (ಅರ್ರೆ ರ್ರೇ ರ್ರೇ..)
ಬಳಿ ಬಂದು (ಅಲ್ಲೇ ಲ್ಲೇ ಲ್ಲೇ..)
ಮುದ್ದಾಡಿ (ಅಯ್ಯಯ್ಯಯ್ಯಯ್ಯೊ)
ಕಚಗುಳಿ ತಾಳಲಾರೆ ಇನ್ನೊಮ್ಮೆ
ಕನಸಲ್ಲಿ  (ಅರ್ರೆ ರ್ರೇ ರ್ರೇ..)
ಬಳಿ ಬಂದು (ಅಲ್ಲೇ ಲ್ಲೇ ಲ್ಲೇ..)
ಮುದ್ದಾಡಿ (ಅಯ್ಯಯ್ಯಯ್ಯಯ್ಯೊ)
ಕಚಗುಳಿ ತಾಳಲಾರೆ

ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೆ
ನೆನ್ನೆ ಕಂಡ ಕನಸು Black and White-u 
ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ ಬರೆಯೋ ಗಮನ
ಈಗ ತಾನೇ ಮೂಡಿದೆ
ಕನಸಲ್ಲಿ  (ಅರ್ರೆ ರ್ರೇ ರ್ರೇ..)
ಬಳಿ ಬಂದು (ಅಲ್ಲೇ ಲ್ಲೇ ಲ್ಲೇ..)
ಮುದ್ದಾಡಿ (ಅಯ್ಯಯ್ಯಯ್ಯಯ್ಯೊ)
ಕಚಗುಳಿ ತಾಳಲಾರೆ
ಇನ್ನೊಮ್ಮೆ
ಕನಸಲ್ಲಿ  (ಅರ್ರೆ ರ್ರೇ ರ್ರೇ..)
ಬಳಿ ಬಂದು (ಅಲ್ಲೇ ಲ್ಲೇ ಲ್ಲೇ..)
ಮುದ್ದಾಡಿ (ಅಯ್ಯಯ್ಯಯ್ಯಯ್ಯೊ)
ಕಚಗುಳಿ ತಾಳಲಾರೆ