Ee Sanje Yeke Jarutide Lyrics
(Rangitaranga)
|
Kannada Lyrics
Female:
Hmm.. Na na na..
Male:
ಈ ಸಂಜೆ ಏಕೆ ಜಾರುತಿದೆ
ಸದ್ದಿಲ್ಲದಂತೆ ಸಾಗುತಿದೆ
ಬೆಳಕ ಸೆರೆಯ ತೊರೆದು
ಈ ಸಂಜೆ ಏಕೆ ಜಾರುತಿದೆ
ನೆರಳನೆ.. ಅರಿಯದ..
ಅಪರಿಚಿತ.. ದಾರಿಯಲಿ
ಇರುಳಿನ.. ಸನಿಹಕೆ
ಈ ಸಂಜೆ ಏಕೆ ಜಾರುತಿದೆ
Hmmm...
ಕಾರ್ಮೋಡ ಮಡಿಲಲ್ಲಿ ಹಸಿ ಮಲಗಿಸಲು
ಶಶಿ ಇನ್ನೂ ಬರಲಿಲ್ಲ ಭುವಿ ಬೆಳಗಿಸಲು
ಸೂರ್ಯನು ಅರಳುವಾವರೆಗೆ
ಬೆಳಕನೆ ಕಾಣದ ಧರೆಗೆ
ವಿಹಾರಿಸೋ ಈ ಹಂಬಲದೊಂದಿಗೆ
ಹತ್ತಿರ ತೀರವ ಸೇರಿ
ಕತ್ತಲೆಯ ತೇರನ್ನೆರಿ
ಬೀಸುವ ಗಾಳಿಯ ಜೊತೆಗೆ
ಈ ಸಂಜೆ ಏಕೆ ಜಾರುತಿದೆ
ಮುಸುಕನ್ನು ತೆರೆದಾಗ ಬರೋ ನಸುಕಿನಲಿ
ನಸುಕುಂಟು ಜೋಪಾನ ಕಳ್ನುಸುಕಿನಲಿ
ಸೆಳೆಯುವ ನೆನಪಿನ ಇರುಳು
ಹೋದರೆ ಶಾಶ್ವತ ಇರುಳು
ಈ ಮಾತಿನ ತಿರುಳನು ಅರಿಯದೆ
ಮುಂಗುರುಳನ್ನು ಹಿಂದೆ ತಳ್ಳಿ
ನಿಲ್ಲದಂತ ವೇಗದಲ್ಲಿ
ಹಾರುವ ಹಕ್ಕಿಯ ಜೊತೆಗೆ
ಈ ಸಂಜೆ ಏಕೆ ಜಾರುತಿದೆ...
ಸದ್ದಿಲ್ಲದಂತೆ ಸಾಗುತಿದೆ
ಬೆಳಕ ಸೆರೆಯ ತೊರೆದು
ಈ ಸಂಜೆ ಏಕೆ ಜಾರುತಿದೆ
ನೆರಳನೆ.. ಅರಿಯದ..
ಅಪರಿಚಿತ.. ದಾರಿಯಲಿ
ಇರುಳಿನ.. ಸನಿಹಕೆ
ಈ ಸಂಜೆ ಏಕೆ ಜಾರುತಿದೆ
Hmmm...
ಕಾರ್ಮೋಡ ಮಡಿಲಲ್ಲಿ ಹಸಿ ಮಲಗಿಸಲು
ಶಶಿ ಇನ್ನೂ ಬರಲಿಲ್ಲ ಭುವಿ ಬೆಳಗಿಸಲು
ಸೂರ್ಯನು ಅರಳುವಾವರೆಗೆ
ಬೆಳಕನೆ ಕಾಣದ ಧರೆಗೆ
ವಿಹಾರಿಸೋ ಈ ಹಂಬಲದೊಂದಿಗೆ
ಹತ್ತಿರ ತೀರವ ಸೇರಿ
ಕತ್ತಲೆಯ ತೇರನ್ನೆರಿ
ಬೀಸುವ ಗಾಳಿಯ ಜೊತೆಗೆ
ಈ ಸಂಜೆ ಏಕೆ ಜಾರುತಿದೆ
ಮುಸುಕನ್ನು ತೆರೆದಾಗ ಬರೋ ನಸುಕಿನಲಿ
ನಸುಕುಂಟು ಜೋಪಾನ ಕಳ್ನುಸುಕಿನಲಿ
ಸೆಳೆಯುವ ನೆನಪಿನ ಇರುಳು
ಹೋದರೆ ಶಾಶ್ವತ ಇರುಳು
ಈ ಮಾತಿನ ತಿರುಳನು ಅರಿಯದೆ
ಮುಂಗುರುಳನ್ನು ಹಿಂದೆ ತಳ್ಳಿ
ನಿಲ್ಲದಂತ ವೇಗದಲ್ಲಿ
ಹಾರುವ ಹಕ್ಕಿಯ ಜೊತೆಗೆ
ಈ ಸಂಜೆ ಏಕೆ ಜಾರುತಿದೆ...