Kanneera Dhare Lyrics (Hosa Belaku)
|
Kannada Lyrics
ಆ... ಆ... ಆ... ಆ...ಕಣ್ಣೀರ ಧಾರೆ ಇದೇಕೆ ಇದೇಕೆ
ಕಣ್ಣೀರ ಧಾರೆ ಇದೇಕೆ ಇದೇಕೆ
ನನ್ನೊಲವಿನ ಹೂವೆ ಈ ಶೋಕವೇಕೆ
ನನ್ನೊಲವಿನ ಹೂವೆ ಈ ಶೋಕವೇಕೆ
ಕಣ್ಣೀರ ಧಾರೆ ಇದೇಕೆ ಇದೇಕೆ
ವಿಧಿಯಾಟವೇನು ಬಲ್ಲವರು ಯಾರು
ಮುಂದೇನು ಎಂದು ಹೇಳುವರು ಯಾರು
ವಿಧಿಯಾಟವೇನು ಬಲ್ಲವರು ಯಾರು
ಮುಂದೇನು ಎಂದು ಹೇಳುವರು ಯಾರು
ಬರುವುದು ಬರಲೆಂದು ನಗು ನಗುತ ಬಾಳದೆ
ಬರುವುದು ಬರಲೆಂದು ನಗು ನಗುತ ಬಾಳದೆ
ನಿರಾಸೆ ವಿಷಾದ ಇದೇಕೆ ಇದೇಕೆ
ನಿರಾಸೆ ವಿಷಾದ ಇದೇಕೆ ಇದೇಕೆ
ಕಣ್ಣೀರ ಧಾರೆ ಇದೇಕೆ ಇದೇಕೆ
ಬಾಳೆಲ್ಲ ನನಗೆ ಇರುಳಾದರೇನು
ಜೊತೆಯಾಗಿ ಎಂದೆಂದು ನೀನಿಲ್ಲವೇನು
ಬಾಳೆಲ್ಲ ನನಗೆ ಇರುಳಾದರೇನು
ಜೊತೆಯಾಗಿ ಎಂದೆಂದು ನೀನಿಲ್ಲವೇನು
ನಾನಿನ್ನ ಕಣ್ಣಿಂದ ನೋಡುತಿರೆ ಸೊಗಸೆಲ್ಲ
ನಾನಿನ್ನ ಕಣ್ಣಿಂದ ನೋಡುತಿರೆ ಸೊಗಸೆಲ್ಲ
ನಿನ್ನಲ್ಲಿ ನೋವು ಇದೇಕೆ ಇದೇಕೆ
ನಿನ್ನಲ್ಲಿ ನೋವು ಇದೇಕೆ ಇದೇಕೆ
ಕಣ್ಣೀರ ಧಾರೆ ಇದೇಕೆ ಇದೇಕೆ
ನನ್ನೊಲವಿನ ಹೂವೆ ಈ ಶೋಕವೇಕೆ
ಕಣ್ಣೀರ ಧಾರೆ ಇದೇಕೆ... ಇದೇಕೆ